ಹೆಗ್ಡೆ, ಬಿ ಎಂ
-  ಮಣಿಪಾಲದ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿರುವ ಡಾ|| ಬೆಳ್ಳೆ ಮೊಗಪ್ಪ ಹೆಗ್ಡೆ 18ನೇ ಆಗಸ್ಟ್ 1938ರಲ್ಲಿ ಜನಿಸಿದರು.  ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಬಿ.ಬಿ.ಎಸ್. ಪದವಿ ಪಡೆದ ಇವರು ಈಖಅಅ, ಈಖಅPI, ಈಖಅPಇ, ಈಖಅP, ಒಖಅP ಮುಂತಾದ ಅನೇಕ ವಿದೇಶಿ ಪದವಿಗಳನ್ನು ಪಡೆದ ಪ್ರತಿಭಾನ್ವಿತ ಹೃದ್ರೋಗ ತಜ್ಞ ವೈದ್ಯ, ಲೇಖಕ, ಉತ್ತಮ ವಾಗ್ಮಿ.  ಕಸ್ತೂರ್‍ಬಾ ಮೆಡಿಕಲ್ ಕಾಲೇಜು, ಮಂಗಳೂರಿನಲ್ಲಿ ಡೀನ್ ಆಗಿ, ಪ್ರಾಂಶುಪಾಲರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಮಣಿಪಾಲ, ಹೊಸದೆಹಲಿಗಳ ಮೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಇಂಗ್ಲೆಂಡಿನಲ್ಲಿ 1988ರಿಂದ ಒಖಅP ಪದವಿ ಪರೀಕ್ಷೆಯ ಪರೀಕ್ಷಿತರಾಗಿ ನೇಮಕಗೊಂಡಿರುವ ಇವರು ಭಾರತದಿಂದ ಆಯ್ಕೆಯಾದ ಅಪರೂಪದ ಜ್ಞಾನನಿಧಿ.  ಪ್ರಾಧ್ಯಾಪಕರಾಗಿ, ಸಂದರ್ಶಕರಾಗಿ, ಪರೀಕ್ಷಕರಾಗಿ, ಮಾರ್ಗದರ್ಶಕರಾಗಿ ಅನೇಕ ದೇಶವಿದೇಶಗಳಿಗೆ ಭೇಟಿ ನೀಡಿ ಭಾರತದ ಕೀರ್ತಿಯನ್ನು ಉನ್ನತಸ್ಥಾನಕ್ಕೇರಿಸಿದ್ದಾರೆ.  ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಪ್ರಭುತ್ವ ಹೊಂದಿದ ಇವರು 30 ಪುಸ್ತಕಗಳನ್ನು ಮತ್ತು ಅಸಂಖ್ಯಾತ ವೈದ್ಯಕೀಯ ಲೇಖನಗಳನ್ನು ಬರೆದಿದ್ದಾರೆ.  ವೈದ್ಯಲೋಕ ಆರೋಗ್ಯ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ.  ಅಲ್ಲದೇ ಅಮೆರಿಕಾ, ಇಂಗ್ಲೆಂಡ್, ಜರ್ಮನಿ, ಚೈನಾ, ಕುವೈತ್ ಮುಂತಾದೆಡೆಗಳಿಂದ ಪ್ರಕಟಗೊಳ್ಳುವ ಪತ್ರಿಕೆಗಳಲ್ಲೂ ಇವರು ರಚಿಸಿದ ಸಂಶೋಧನಾ ಲೇಖನಗಳು ಪ್ರಕಟಗೊಂಡಿವೆ.  ಇವರಿಗೆ ಸಂದ ಹಲವಾರು ಪ್ರಶಸ್ತಿಗಳಲ್ಲಿ 'ಪ್ರೆಡ್ಸ್ ಆಪ್ ಇಂಡಿಯಾ "ಡಾ|| ಬಿ.ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ", "ಜಗದೀಶ್ ಚಂದ್ರ ಬೋಸ್ ಪ್ರಶಸ್ತಿ", "ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ" ಮುಂತಾದ ಅನೇಕ ರಾಜ್ಯಮಟ್ಟದ, ರಾಷ್ಟ್ರಮಟ್ಟದ ಮತ್ತು ಅಂತರ್‍ರಾಷ್ಟೀಯ ಮಟ್ಟದ ಪ್ರಶಸ್ತಿಗಳು ಸಂದಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.  ಇವಲ್ಲದೇ ಆಯುರ್ವೇದದ ಪ್ರತಿಪಾದಕರಾದ ಇವರು ಲಂಡನ್‍ನಲ್ಲಿ, ಥೇಮ್ಸ್ ಹ್ಯಾಲಿ ವಿಶ್ವವಿದ್ಯಾಲಯ ಸ್ಥಾಪಿಸಿರುವ ಆಯುರ್ವೇದ ಕಾಲೇಜಿಗೆ ಎಲ್ಲ ಬಗೆಯ ಸಹಾಯ ನೀಡಿದ್ದಾರೆ.  ಇದೇ ರೀತಿಯ ಮತ್ತೊಂದು ಕಾಲೇಜು ಜಪಾನ್‍ನಲ್ಲಿ ಆರಂಭಿಸಲಾಗುತ್ತಿದೆ.  ಭಾರತದ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.  ಕುವೈತ್ ವಿಶ್ವವಿದ್ಯಾಲಯದ ಸಂಶೋಧಕ ರೆಫ್ರಿಯಾಗಿದ್ದಾರೆ.			
(ಡಾ. ವಸುಂಧರಾ ಭೂಪತಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ